ಅವಲೋಕನ

ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣವೆ ಹಳ್ಳಿಯ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1987 ರಿಂದ 1907ರಲ್ಲಿ ನಿರ್ಮಾಣವಾಗಿರುತ್ತದೆ. ವೇದಾವತಿ ನದಿಯ ಕೃಷ್ಣಾ ನದಿಯ ಉಪನದಿಯಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ವಿವಿ ಸಾಗರ ಯೋಜನೆಯ ಮೂಲ ಉದ್ಧೇಶವಾಗಿರುತ್ತದೆ. 43.28 ಮಿ. ಎತ್ತರದ (142 ft) ಮತ್ತು 405.50 ಮೀ ಉದ್ದದ non overflow ಅಣೆಕಟ್ಟು ನಿರ್ಮಾಣದ ಈ ಯೋಜನೆಯಿಂದ 25,000 ಏಕರೆ ಭೂಮಿಗೆ ನೀರಾವರಿಯನ್ನು ಒದಗಿಸಲಾಗಿದೆ. ಸದರಿ ಯೋಜನೆಯಲ್ಲಿ ನೀರಾವರಿಯನ್ನು ಮೇಲ್ಮಟ್ಟದ ಕಾಲುವೆ ಮುಖಾಂತರ ಹಾಗೂ ಜಲಾಶಯದಿಂದ 8 ಕಿ.ಮೀ ಕೆಳಭಾಗದಲ್ಲಿ ನಿರ್ಮಿಸಿರುವ ಕಾರ್ತಿಕೇಯನ ಹಳ್ಳಿ ಅಣೆಕಟ್ಟೆಯ ಎಡ ಹಾಗೂ ಬಲದಂಡೆ ಕಾಲುವೆಗಳ ಮೂಲಕ ಒದಗಿಸಲು ಯೋಜಿಸಲಾಗಿರುತ್ತದೆ.

ಅಣೆಕಟ್ಟು ನಿರ್ಮಾಣದಿಂದ ಜಲಾಶಯದ ಒಟ್ಟಾರೆ ಸಂಗ್ರಹಣ ಸಾಮಥ್ರ್ಯವು 850.30 mcum (30 ಟಿಎಂಸಿ ಆಗಿರುತ್ತದೆ. ಸದರಿ ಯೋಜನೆಯಿಂದ 148.32 mcum (5.25 ಟಿಎಂಸಿ) ನೀರನ್ನು ಬಳಸಲು ಯೋಜಿಸಲಾಗಿರುತ್ತದೆ. ಈ ಅಣೆಕಟ್ಟೆಯ ಜಲಾವೃತ್ತ ಪ್ರದೇಶ 5374.00 ಚದರ ಕಿ.ಮೀ (2075 ಚದರ ಮಿಲಿ ಇರುತ್ತದೆ)

ಇದರಲ್ಲಿ 3820 ಚದರ ಕಿ.ಮೀ ಪ್ರತಿಬಂಧಕ ಅಚ್ಚುಕಟ್ಟು ಪ್ರದೇಶವು ಕೂಡ ಸೇರಿರುತ್ತದೆ. ಜಲಶಾಯದ ವಾರ್ಷಿಕ ಇಳುವರಿ ಕನಿಷ್ಠ 48 mcum ಯಿಂದ ಗರಿಷ್ಠ 455 mcum ಗಳಾಗಿರುತ್ತದೆ. ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮುಖ್ಯ ಅಣೆಕಟ್ಟು non-overflow ಅಣೆಕಟ್ಟನ್ನು ಹೊಂದಿರುವುದಾಗಿರುತ್ತದೆ. ಹೆಚ್ಚುವರಿ ನೀರನ್ನು ವ್ಯವಸ್ಥೆಯ ಹೊರಹಾಕುವ ಅಣೆಕಟ್ಟಿನ 2.40 ಕಿ.ಮೀ ಉತ್ತರಕ್ಕೆ ಒಂದು waste-weir ರನ್ನು ನಿರ್ಮಿಸಲಾಗಿರುತ್ತದೆ. ಸದರಿ Weir 143 ಮಿ (468 ಚದರ) ಉದ್ದ ಹಾಗೂ 1.82 ಮಿ (6 ಚದರ) ಆಳವಾಗಿದ್ದು, 991 cumecs (35,000 cusecs) ಪ್ರಮಾಣದಷ್ಟು ವಿನ್ಯಾಸದ ಪ್ರವಾಹದ ನೀರನ್ನು ಹಾಕಲು 1.82 ಮಿ ನೀರಿನ ಮತ್ತು ಹರಿವಿನ ಎತ್ತರಕ್ಕೆ ವಿನ್ಯಾಸಿಸಲಾಗಿರುತ್ತದೆ.

ನಿರ್ಮಾಣ ಇತಿಹಾಸ

ಅಣೆಕಟ್ಟು 1897 ರಿಂದ 1907ರಲ್ಲಿ ನಿರ್ಮಾಣವಾಗಿರುವ ಕಾರಣದಿಂದ ಅಣೆಕಟ್ಟು ಹಾಗೂ ಅದರ ಇತರ ಕಟ್ಟಡಗಳ ನಿರ್ಮಾಣದ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.

ಯೋಜನೆಯ ಪ್ರಮುಖ ಅಂಶಗಳು

ನದಿಯ ಹೆಸರು ವೇದಾವತಿ
ಅಣೆಕಟ್ಟಿನ ಸ್ಥಳ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಹಳ್ಳಿಯ ಹತ್ತಿರ
ರೇಖಾಂಶ 750 01′ 00″ ಪೂರ್ವ
ಅಕ್ಷಾಂಶ 130 20’ 0” ಉತ್ತರ
ಪ್ರವೇಶ ಸದರಿ ಅಣೆಕಟ್ಟನ್ನು ಬೆಂಗಳೂರು-ಪುಣೆ (ರಾ.ಹೆ.4) ರಿಂದ ಹೊರಡುವ 20 ಕಿ.ಮೀ ಉದ್ದದ ಹಿರಿಯೂರು ರಸ್ತೆಯ ಮೂಲಕ ತಲುಪಬಹುದಾಗಿರುತ್ತದೆ.

ಚಿತ್ರವನ್ನು ಹಿಗ್ಗಿಸಲು ಅದರ ಮೇಲೆ ಕ್ಲಿಕ್ ಮಾಡಿ

ಭೌತಿಕ ಲಕ್ಷಣಗಳು

ಒಟ್ಟು ಜಲಾನಯನ ಪ್ರದೇಶ 5374.00 ಚ.ಕಿ.ಮೀ (2075.ಚ.ಮೈಲಿ)
ಸ್ವತಂತ್ರ ಜಲಾನಯನ ಪ್ರದೇಶ 1554.00 ಚ.ಕಿ.ಮೀ (600.ಚ.ಮೈಲಿ)
ತಡೆಹಿಡಿದ ಜಲಾನಯನ ಪ್ರದೇಶ 3820.00 ಚ.ಕಿ.ಮೀ (1475.ಚ.ಮೈಲಿ)
ಜಲಾನಯನ ಸ್ವರೂಪ ಅಣೆಕಟ್ಟಿನ ಮೇಲ್ಭಾಗದಲ್ಲಿ ಇರುವ ಬಹುತೇಕ ಜಲಾನಯನ ಪ್ರದೇಶವು 3912 ಮಿ.ಮೀ ಮಳೆ ಇರುವ ಗುಡ್ಡಗಾಡು ಪ್ರದೇಶ ಹಾಗು ಇತರೇ ಪ್ರದೇಶಗಳು 457 ಮಿ.ಮೀ ಮಳೆ ಇರುವ ಸಮತಟ್ಟು ಪ್ರದೇಶವಾಗಿರುತ್ತದೆ.
ಸರಾಸರಿ ವಾರ್ಷಿಕ ಮಳೆ 600.ಮಿ.ಮೀ (24 ಇಂಚುಗಳು)
ವಾತಾವರಣ ವಾರ್ಷಿಕ ಸರಾಸರಿ ತಾಪಮಾನ 310C ಇರುವ ಮಧ್ಯಮ ವಾತಾವರಣ.
ಅಚ್ಚುಕಟ್ಟು ಪ್ರದೇಶದಲ್ಲಿನ ಮಣ್ಣಿನ ವಿಶಿಷ್ಟತೆ ಕೆಂಪು ಮತ್ತು ಕಪ್ಪು ಮಣ್ಣು
ಅಣೆಕಟ್ಟಿನ ಸ್ಥಳದಲ್ಲಿ ವಾರ್ಷಿಕ ನೀರಿನ ಲಭ್ಯತೆಯ ಪ್ರಮಾಣ ಲಭ್ಯವಿರುವ ನೀರು ಕನಿಷ್ಠ 48 ದಷಲಕ್ಷ ಘನ ಮೀ. ದಿಂದ 455 ದಷಲಕ್ಷ ಘನ ಮೀ ವರೆಗೆ ಇರುತ್ತದೆ.
ಒಟ್ಟು ಬಳಸುತ್ತಿರುವ ಪ್ರಮಾಣ 48.32 ದಶಲಕ್ಷ ಘನ ಮೀ (5.25 ಟಿ.ಎಂ.ಸಿ)
ಭೌಗೋಳಿಕ ವೈಶಿಷ್ಟ್ಯಗಳು ಧಾರವಾಡ ಗುಂಪಿಗೆ ಸೇರಿದ ಚಿತ್ರದುರ್ಗ ಶಿಷ್ಸ್ಟ್ ಬೆಲ್ಟ್ ಸ್ಥಳೀಯ ಭೂ ವಿಜ್ಞಾನ ಬಾಬಾಬುಡಾನ ರಚನೆಯ ಮೇಲೆ ಇದ್ದು ಡೋಲೊಮೆಟಿಕ್ ಸಿಲೀಶಿಯಸ್ ಸುಣ್ಣದಕಲ್ಲು ರಚನೆ ಬ್ಯಾಂಡೆಡ್ ಕಬ್ಬಿಣದ ರಚನೆ ಕ್ವಾಟ್ಜ್ ಕ್ಲೋರೈಡ್ ಶಿಷ್ಸ್ಟ್ ರಚನೆ ಮೇಲಿರುತ್ತದೆ.

ತಾಂತ್ರಿಕ ವಿವರಗಳು

ಒಟ್ಟು ಸಂಗ್ರಹಣಾ ಸಾಮರ್ಥ್ಯ 850.30 ದಶಲಕ್ಷ ಘ.ನ.ಮೀ (30 ಟಿ.ಎಂ.ಸಿ)
ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 47.80 ದಶಲಕ್ಷ ಘ.ನ.ಮೀ (1.875 ಟಿ.ಎಂ.ಸಿ)
ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ 802.50 ದಶಲಕ್ಷ ಘ.ನ.ಮೀ(28.125 ಟಿ.ಎಂ.ಸಿ)
ನದಿಯ ಕನಿಷ್ಟ ಮಟ್ಟ ಆರ್.ಎಲ್ 612.80 ಮೀ(ಆರ್.ಎಲ್ 2010.50ಅಡಿ)
ಉಪಯುಕ್ತವಲ್ಲದ ಸಂಗ್ರಹಣಾ ಮಟ್ಟ ಆರ್.ಎಲ್ 631.09 ಮೀ(ಆರ್.ಎಲ್ 2070.50 ಅಡಿ)
ಪೂರ್ಣ ಜಲಾಶಯದ ಮಟ್ಟ (ಎಫ್.ಆರ್.ಎಲ್) ಆರ್.ಎಲ್ 652.43 ಮೀ(ಆರ್.ಎಲ್ 2140.50 ಅಡಿ)
ಗರಿಷ್ಟ ನೀರಿನ ಮಟ್ಟ ಆರ್.ಎಲ್ 654.25ಮೀ(ಆರ್.ಎಲ್ 2146.50 ಅಡಿ)
ಅಣೆಕಟ್ಟೆಯ ಮೇಲ್ಭಾಗ ಆರ್.ಎಲ್ 656.08 ಮೀ(ಆರ್.ಎಲ್ 2152.50 ಅಡಿ)
ಜಲಾವೃತ ಪ್ರದೇಶ (ಎಫ್.ಆರ್.ಎಲ್) 8763 ಹೆಕ್ಟೇರ್(21,645 ಎಕರೆ)

ಅಣೆಕಟ್ಟಿನ ಮಾದರಿ ಕೋಡಿಯ ಭಾಗವನ್ನು ಹೊರತುಪಡಿಸಿ ಅಣೆಕಟ್ಟೆಯನ್ನು ಸುಣ್ಣ ಗಾರೆ ಮತ್ತು ರಬಲ್ ಕಲ್ಲು ಕಟ್ಟಡದಿಂದ ನಿರ್ಮಿಸಲಾಗಿದೆ
ಅಣೆಕಟ್ಟಿನ ಉದ್ದ 405.40 ಮೀ (1330 ಅಡಿ)
ಅಡಿಪಾಯದ ಕೆಳಮಟ್ಟ ಆರ್‍ಎಲ್ 606.70 ಮೀ (ಆರ್‍ಎಲ್ 1990.50 ಅಡಿ)
ನದಿ ಕೆಳ ಮಟ್ಟ ಆರ್‍ಎಲ್ 612.80 ಮೀ (ಆರ್‍ಎಲ್ 2010.50 ಅಡಿ)
ಅಡಿಪಾಯದ ತಳ ಮಟ್ಟದಿಂದ ಅಣೆಕಟ್ಟಿನ ಗರಿಷ್ಟ ಎತ್ತರ 49.38 ಮೀ
  ಆರ್‍ಎಲ್ 656.08 ಮೀ (ಆರ್‍ಎಲ್ 606.70 ಅಡಿ)
ನದಿಯ ಕೆಳಮಟ್ಟದಿಂದ ಅಣೆಕಟ್ಟಿನ ಗರಿಷ್ಟ ಎತ್ತರ 43.28 ಮೀ
  ಆರ್‍ಎಲ್ 656.08ಮೀ (ಆರ್‍ಎಲ್ 612.80 ಅಡಿ)
ಅಣೆಕಟ್ಟಿನ ಮೇಲ್ಭಾಗದ ಅಗಲ 4.57ಮೀ(15 ಅಡಿ)

ವಿಧ ವಿಶಾಲ ಅಗಲವಿರುವ ಕೋಡಿ(ಬ್ರಾಡ್ ಕ್ರೆಸ್ಟಡ್ ವೇಸ್ಟ್ ವಿಯರ್)
ಸ್ಥಳ ತಡಿ ಭಾಗದ ಅಗೆತವಿರುವ ಸ್ಥಳದಲ್ಲಿ ಅಣೆಕಟ್ಟಿನ ಉತ್ತರ ಭಾಗದಿಂದ 2.40 ಕಿ.ಮೀ ದೂರದಲ್ಲಿ
ಉದ್ದ 143 ಮೀ (468 ಅಡಿ)
ಕ್ರೆಸ್ಟ್-ನ/ಕೋಡಿಯ ಅಗಲ 1.20 ಮೀ
ಕ್ರೆಸ್ಟ್-ನ/ ಕೋಡಿಯ ಮೇಲ್ಭಾಗದ ಮಟ್ಟ ಆರ್‍ಎಲ್ 652.43- (ಆರ್‍ಎಲ್ 2140.50 ಅಡಿ)
ಗರಿಷ್ಟ ನೀರಿನ ಮಟ್ಟ ಆರ್‍ಎಲ್ 654.25- (ಆರ್‍ಎಲ್ 2146.50 ಅಡಿ)
ಕೋಡಿಯ ಮೇಲೆ ನೀರು ಹರಿವಿನ ಎತ್ತರ (ಸ್ಪಿಲ್ಯೇಜ್) 1.82 ಮೀ
  ಆರ್‍ಎಲ್ 654.25 ಮೀ (ಆರ್‍ಎಲ್ 652.43.ಅಡಿ)
ಸ್ಪಿಲ್ ವೇ ವಿನ್ಯಾಸಕ್ಕೆ ಅಳವಡಿಸಲಾದ ವಿನ್ಯಾಸಿತ ಪ್ರವಾಹದ ಹರಿವು 991 ಕ್ಯೂಮೆಕ್ಸ್ (35000 ಕ್ಯೂಸೆಕ್ಸ್)

ಸಂಖ್ಯೆ ಒಂದು
ವಿಧ ಸ್ಟೋನಿ ಟೈಪ್
ಸ್ಥಳ ಸರಪಳಿ 30.00 ಮೀ
ಸಿಲ್ ಲೆವೆಲ್ ಆರ್‍ಎಲ್ 631.09ಮೀ (ಆರ್‍ಎಲ್ 2070.50.ಅಡಿ)
ವೆಂಟ್ ಸೈಜ್ 1.67 x 3.90 ಮೀ (5’ 6” x 12’ 9”)
ಹರಿವಿನ ಪ್ರಮಾಣ 28.91 ಕ್ಯೂಮೆಕ್ಸ್ ( 1021.00 ಕ್ಯೂಸೆಕ್ಸ್)
ಅಚ್ಚುಕಟ್ಟು 10117 ಹೆಕ್ಟೇರ್ (25000 ಎಕರೆ)

ನೀರಾವರಿ ತೂಬು ಎಡ ದಂಡೆ ತೂಬು/ ಬಲ ದಂಡೆ ತೂಬು
ಸಂಖ್ಯೆ 05-ಸಂಖ್ಯೆ
ಸ್ಥಳ ಕೆ.ಕೆ ಅಣೆಕಟ್ಟಿನ 8.00 ಕಿ.ಮೀ ಹತ್ತಿರ
ಗಾತ್ರ 5.00 ಅಡಿ* 4.00 ಅಡಿ/5.00 ಅಡಿ * 4.00 ಅಡಿ
ಗೇಟುಗಳ ಮಾದರಿ ರೆಕ್ಟ್ಯಾಂಗ್ಯುಲರ್ ಗೇಟು
(ಸಿಲ್ ಲೆವೆಲ್) ತೂಬಿನ ತಳಮಟ್ಟ
ನೀರು ಹರಿವಿನ ಸಾಮರ್ಥ್ಯ 325 ಕ್ಯೂಸೆಕ್ಸ್

ವಿವರಗಳು ಎಡ ದಂಡೆ ಕಾಲುವೆ ಬಲ ದಂಡೆ ಕಾಲುವೆ ಶಾಖಾ ಕಾಲುವೆ ಮೇಲ್ ಮಟ್ಟದ ಕಾಲುವೆ ಕೆಳ ಮಟ್ಟದ ಕಾಲುವೆ
1 2 3 4 5 6
ಪ್ರಾರಂಭವಾಗುವ ಸ್ಥಳ ಡ್ಯಾಮಿನಿಂದ 8.00 ಕಿ.ಮೀ ದೂರ ಇರುವ ಕೆ.ಕೆ ಅಣೆಕಟ್ಟಿನ ಸಮೀಪ ಡ್ಯಾಮಿನಿಂದ 8.00 ಕಿ.ಮೀ ದೂರ ಇರುವ ಕೆ.ಕೆ ಅಣೆಕಟ್ಟಿನ ಸಮೀಪ ಎಲ್.ಬಿ.ಸಿಯ ಸರಪಳಿ 48.00 ಕಿ.ಮೀ ಯಿಂದ ಬಿದರಕೆರೆ ಶಾಖಾ ಕಾಲುವೆ ಹಾಗೂ ಜಡೆಗೊಂಡನಹಳ್ಳಿ ಶಾಖಾ ಕಾಲುವೆಗಳು ಆರಂಭಗೊಳ್ಳುತ್ತವೆ. ಆರ್.ಬಿ.ಸಿಯ ಸರಪಳಿ 46.60 ಕಿ.ಮೀ ಯಿಂದ ಹೋವಿನಹೊಳೆ ಶಾಖಾ ಕಾಲುವೆ, ಸಮುದ್ರಹಳ್ಳಿ ಶಾಖಾ ಕಾಲುವೆ ಹಾಗೂ ಕುಂದಲಾಗುರ ಶಾಖಾ ಕಾಲುವೆಗಳು ಆರಂಭಗೊಳ್ಳುತ್ತವೆ. ಸರಪಳಿ 300.00 ಮೀ. ನದಿಯ ತೂಬಿನಿಂದ
ಉದ್ದ (ಕಿ.ಮೀ) 48.00ಕಿ.ಮೀ 46.40ಕಿ.ಮೀ 22.67ಕಿ.ಮೀ 9.40ಕಿ.ಮೀ
ವಿತರಣಾ ಕಾಲುವೆಗಳ ಸಂಖ್ಯೆ 39 53 23
ನೀರು ಹರಿಸುವ ಸಾಮರ್ಥ್ಯ 325 ಕ್ಯೂಸೆಕ್ಸ್ 325 ಕ್ಯೂಸೆಕ್ಸ್ 55.00 ಕ್ಯೂಸೆಕ್ಸ್
ಬೆಳೆಯ ಮಾದರಿ ಮೂಲ ಯೋಜನೆಯ ಪ್ರಕಾರ ಭತ್ತ ಮೂಲ ಯೋಜನೆಯ ಪ್ರಕಾರ ಭತ್ತ ಮೂಲ ಯೋಜನೆಯ ಪ್ರಕಾರ ಭತ್ತ ಮೂಲ ಯೋಜನೆಯ ಪ್ರಕಾರ ಭತ್ತ
ಬೆಳೆಯ ಮಾದರಿ ವಾಸ್ತವಿಕವಾಗಿ ತೋಟ ವಾಸ್ತವಿಕವಾಗಿ ತೋಟ ವಾಸ್ತವಿಕವಾಗಿ ತೋಟ ವಾಸ್ತವಿಕವಾಗಿ ತೋಟ  
ಒಟ್ಟು ನೀರಾವರಿ ಪ್ರದೇಶ ಎಕರೆ/ಹೆಕ್ಟೇರ್ 4793 ಹೆಕ್ಟೇರ್ 3957 ಹೆಕ್ಟೇರ್ 2937 ಹೆಕ್ಟೇರ್ 448 ಹೆಕ್ಟೇರ್
ಫಲಾನುಭವಿ ತಾಲ್ಲೂಕು/ಜಿಲ್ಲೆಗಳು ಹಿರಿಯೂರು/ಚಿತ್ರದುರ್ಗ ಹಿರಿಯೂರು/ಚಿತ್ರದುರ್ಗ ಹಿರಿಯೂರು/ಚಿತ್ರದುರ್ಗ ಹಿರಿಯೂರು/ಚಿತ್ರದುರ್ಗ
ಲೈನಿಂಗ್ ಆಗಿರುವ/ಆಗದಿರುವ ಉದ್ದ 8.132 ಕಿ.ಮೀ/ 39.868.ಕಿ.ಮೀ 10.385 ಕಿ.ಮೀ/ 36.015 ಕಿ.ಮೀ 4.56 ಕಿ.ಮೀ/ 18.11 ಕಿ.ಮೀ 2.93 ಕಿ.ಮೀ/ 6.67 ಕಿ.ಮೀ
ಅಧಿಕೃತ ನೀರು ಹರಿವಿನ ಸಾಮಥ್ರ್ಯ (ಕ್ಯೂಮೆಕ್ಸ್/ಕ್ಯೂಸೆಕ್ಸ್) 325 ಕ್ಯೂಸೆಕ್ಸ್ 325 ಕ್ಯೂಸೆಕ್ಸ್ 55.00 ಕ್ಯೂಸೆಕ್ಸ್
ಫಲಾನುಭವಿ ತಾಲ್ಲೂಕು/ಜಿಲ್ಲೆಗಳು ಹಿರಿಯೂರು, ಸಿರಾ/ ಚಿತ್ರದುರ್ಗ/ತುಮಕೂರು ಹಿರಿಯೂರು, ಸಿರಾ/ ಚಿತ್ರದುರ್ಗ/ತುಮಕೂರು ಹಿರಿಯೂರು, ಸಿರಾ/ ಚಿತ್ರದುರ್ಗ/ತುಮಕೂರು
ಲೈನಿಂಗ್ ಆಗಿರುವ/ಆಗದಿರುವ ಉದ್ದ 15.600 ಕಿ.ಮೀ/ 16.00 ಕಿ.ಮೀ 0.600 ಕಿ.ಮೀ/ 2.50 ಕಿ.ಮೀ
ಅಧಿಕೃತ ನೀರು ಹರಿವಿನ ಸಾಮಥ್ರ್ಯ (ಕ್ಯೂಮೆಕ್ಸ್/ಕ್ಯೂಸೆಕ್ಸ್) 75 ಕ್ಯೂಸೆಕ್ಸ್ 125 ಕ್ಯೂಸೆಕ್ಸ್ ಕೋಡಿಯ ಭಾಗವನ್ನು ಹೊರತುಪಡಿಸಿದ ಅಣೆಕಟ್ಟೆಯನ್ನು ಸುಣ್ಣ ಗಾರೆಯ ಮತ್ತು ರಬಲ್ ಕಲ್ಲು ಕಟ್ಟಡದಿಂದ ನಿರ್ಮಿಸಲಾಗಿದೆ.