ಸಾಮಾನ್ಯ ಪ್ರಶ್ನೆಗಳು

ಪಿ.ಡಬ್ಲ್ಯೂ.ಡಿಯಲ್ಲಿನ ಗುತ್ತಿಗೆದಾರರ ದರ್ಜೆಯು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಲ್ಲಿನ ಗುತ್ತಿಗೆದಾರರ ದರ್ಜೆಗಳು ಒಂದೇ ಆಗಿರುತ್ತದೆಯೇ?

ಇಲ್ಲ

ಇತರೆ ನಿಗಮಗಳಡಿ (ಕನೀನಿನಿ, ಕೃ.ಭಾ.ಜ.ನಿ.ನಿ) ನೋಂದಾಣಿಯಾಗಿರುವ ಗುತ್ತಿಗೆದಾರರ ನೋಂದಾಣಿಯು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಯಲ್ಲಿ ಮಾನ್ಯವಾಗಿರುತ್ತದೆಯೇ?

ಇಲ್ಲ, ಆದರೆ ಸದ್ಯಕ್ಕೆ, ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ನೋಂದಾಣಿಯಾಗಿರುವ ಗುತ್ತಿಗೆದಾರರ ನೋಂದಾಣಿಯು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಲ್ಲಿ ಮಾನ್ಯವಾಗಿರುತ್ತದೆ

ಗುತ್ತಿಗೆದಾರರು ಇ-ಪ್ರೊಕ್ಯೂರ್‍ಮೆಂಟ್ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಡಿಜಿಟಲ್ ಸಹಿ ಇರುವ ಪ್ರಮಾಣ ಪತ್ರಗಳನ್ನು ಹೇಗೆ ಪಡೆಯುವುದು?

ಮಿಂಚು-ಸಂಗ್ರಹಣಾ ವ್ಯವಸ್ಥೆಯನ್ನು ನಿರಂತರವಾಗಿ ಕೆಲಸಗಳ, ಸರಕುಗಳು ಮತ್ತು ಸೇವೆಗಳನ್ನು ಸಂಗ್ರಹಿಸುತ್ತಿರುವ ಸರ್ಕಾರದ ನಲವತ್ತು ಇಲಾಖೆಗಳಲ್ಲಿ/ಸಂಸ್ಥೆಗಳಲ್ಲಿ ಮಿಂಚು ಆಡಳಿತ ಸಂಗ್ರಹಣಾ ವೇದಿಕೆ ಮೂಲಕ ಸರ್ಕಾರವು ಅಳವಡಿಸುತ್ತಿದೆ. ಈ ವೇದಿಕೆ ಮೂಲಕ ನಿರ್ವಹಿಸುವ ವ್ಯವಹಾರಗಳು ಸುರಕ್ಷಿತವಾಗಿರುತ್ತವೆ ಮತ್ತು ದೃಢೀಕರಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಮಿಂಚು-ಸಂಗ್ರಹಣಾ ವೇದಿಕೆಯನ್ನು ಪಿಕೆಐ(PKI) ಮೂಲಭೂತ ಸೌಕರ್ಯದೊಂದಿಗೆ ಸಕ್ರಿಯಗೊಳಿಸಲಾಗಿದೆ.

ಮಿಂಚು-ಸಂಗ್ರಹಣಾ ವೇದಿಕೆಯಲ್ಲಿ ಭಾಗವಹಿಸುವ ಮತ್ತು ಬಳಸುತ್ತಿರುವ ಎಲ್ಲಾ ಗುತ್ತಿಗೆದಾರರ ಮತ್ತು ಸರಬರಾಜುದಾರರ ವರ್ಗವು ಅವರನ್ನು ಗುರುತಿಸಿಕೊಳ್ಳಲು ಅಂಕೀಯ ಸಹಿಗಳನ್ನು ಬಳಸಿಕೊಂಡು ಸೈನ್-ಇನ್ ಮಾಡಲು ಅವರ ಬಿಡ್‍ಗಳನ್ನು ಸಲ್ಲಿಸುವಾಗ ಬಿಡ್‍ಗಳು ತಿರಸ್ಕøತವಾಗದಿರುವುದನ್ನು ಖಚಿತ ಪಡಿಸಿಕೊಳ್ಳುವುದು ಗೌಪ್ಯತೆ ಮತ್ತು ಮಾಹಿತಿಯ ಸಮಗ್ರತೆಯನ್ನು ಗೂಢಲಿಪಿಕರಿಸಲಾಗಿರುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಮಿಂಚು-ಸಂಗ್ರಹಣಾ ಯೋಜನೆಗಾಗಿ ಗುತ್ತಿಗೆದಾರರಿಗೆ ಮತ್ತು ಪೂರೈಕೆದಾರರ ಸಮುದಾಯಕ್ಕೆ ಅಂಕೀಯ ಪ್ರಮಾಣಪತ್ರಗಳನ್ನು ವಿತರಿಸುವ ನಾಲ್ಕು ಪರವಾನಗಿ ಪ್ರಮಾಣೀಕರಿಸಿದ ಪ್ರಾಧಿಕಾರಿಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಪಟ್ಟಿಗೆ ಸೇರಿದ ಪರವಾನಿಗೆ ಪ್ರಮಾಣೀಕರಿಸಿದ 4 ಪ್ರಾಧಿಕಾರಿಗಳು ಈ ಕೆಳಗಿನಂತಿವೆ.

  • ಟಿ.ಸಿ.ಎಸ್ ಲಿಮಿಟೆಡ್
  • (ಎನ್) ಕೋಡ್ ಸಲ್ಯೂಷನ್ಸ್ ಲಿಮಿಟೆಡ್
  • ಸೇಫ್-ಸ್ಕ್ರಿಪ್ಟ್ ಲಿಮಿಟೆಡ್
  • ಎಂ.ಟಿ.ಎನ್.ಎಲ್

ಗುತ್ತಿಗೆದಾರರು ಇ-ಪ್ರೊಕ್ಯೂರ್‍ಮೆಂಟ್ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಡಿಜಿಟಲ್ ಸಹಿ ಇರುವ ಪ್ರಮಾಣ ಪತ್ರಗಳನ್ನು ಹೇಗೆ ನೋಂದಾಯಿಸುವುದು?

ದರ್ಜೆ-III ಡಿ.ಎಸ್.ಸಿ ಯನ್ನು ಪಡೆದ ನಂತರ ಗುತ್ತಿಗೆದಾರರು ಇ-ಆಡಳಿತ ಕಛೇರಿ, ನಂ: 141, 1ನೇ ಮಹಡಿ, ಎಸ್.ಕಟ್ಟಡ, ಬೆಂಗಳೂರು-560001 ರಲ್ಲಿ ಹೋಗಿ ನೋಂದಣಿ ಶುಲ್ಕ ರೂ.500/- ಪಾವತಿಸಿ ಈ ಪ್ರಮಾಣ ಪತ್ರಗಳನ್ನು ನೊಂದಾಯಿಸಿತಕ್ಕದ್ದು.