ಅವಲೋಕನ
ವಾಣಿ ವಿಲಾಸ ಸಾಗರ ಜಲಾಶಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣವೆ ಹಳ್ಳಿಯ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1987 ರಿಂದ 1907ರಲ್ಲಿ ನಿರ್ಮಾಣವಾಗಿರುತ್ತದೆ. ವೇದಾವತಿ ನದಿಯ ಕೃಷ್ಣಾ ನದಿಯ ಉಪನದಿಯಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ವಿವಿ ಸಾಗರ ಯೋಜನೆಯ ಮೂಲ ಉದ್ಧೇಶವಾಗಿರುತ್ತದೆ. 43.28 ಮಿ. ಎತ್ತರದ (142 ft) ಮತ್ತು 405.50 ಮೀ ಉದ್ದದ non overflow ಅಣೆಕಟ್ಟು ನಿರ್ಮಾಣದ ಈ ಯೋಜನೆಯಿಂದ 25,000 ಏಕರೆ ಭೂಮಿಗೆ ನೀರಾವರಿಯನ್ನು ಒದಗಿಸಲಾಗಿದೆ. ಸದರಿ ಯೋಜನೆಯಲ್ಲಿ ನೀರಾವರಿಯನ್ನು ಮೇಲ್ಮಟ್ಟದ ಕಾಲುವೆ ಮುಖಾಂತರ ಹಾಗೂ ಜಲಾಶಯದಿಂದ 8 ಕಿ.ಮೀ ಕೆಳಭಾಗದಲ್ಲಿ ನಿರ್ಮಿಸಿರುವ ಕಾರ್ತಿಕೇಯನ ಹಳ್ಳಿ ಅಣೆಕಟ್ಟೆಯ ಎಡ ಹಾಗೂ ಬಲದಂಡೆ ಕಾಲುವೆಗಳ ಮೂಲಕ ಒದಗಿಸಲು ಯೋಜಿಸಲಾಗಿರುತ್ತದೆ.
ಅಣೆಕಟ್ಟು ನಿರ್ಮಾಣದಿಂದ ಜಲಾಶಯದ ಒಟ್ಟಾರೆ ಸಂಗ್ರಹಣ ಸಾಮಥ್ರ್ಯವು 850.30 mcum (30 ಟಿಎಂಸಿ ಆಗಿರುತ್ತದೆ. ಸದರಿ ಯೋಜನೆಯಿಂದ 148.32 mcum (5.25 ಟಿಎಂಸಿ) ನೀರನ್ನು ಬಳಸಲು ಯೋಜಿಸಲಾಗಿರುತ್ತದೆ. ಈ ಅಣೆಕಟ್ಟೆಯ ಜಲಾವೃತ್ತ ಪ್ರದೇಶ 5374.00 ಚದರ ಕಿ.ಮೀ (2075 ಚದರ ಮಿಲಿ ಇರುತ್ತದೆ)
ಇದರಲ್ಲಿ 3820 ಚದರ ಕಿ.ಮೀ ಪ್ರತಿಬಂಧಕ ಅಚ್ಚುಕಟ್ಟು ಪ್ರದೇಶವು ಕೂಡ ಸೇರಿರುತ್ತದೆ. ಜಲಶಾಯದ ವಾರ್ಷಿಕ ಇಳುವರಿ ಕನಿಷ್ಠ 48 mcum ಯಿಂದ ಗರಿಷ್ಠ 455 mcum ಗಳಾಗಿರುತ್ತದೆ. ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮುಖ್ಯ ಅಣೆಕಟ್ಟು non-overflow ಅಣೆಕಟ್ಟನ್ನು ಹೊಂದಿರುವುದಾಗಿರುತ್ತದೆ. ಹೆಚ್ಚುವರಿ ನೀರನ್ನು ವ್ಯವಸ್ಥೆಯ ಹೊರಹಾಕುವ ಅಣೆಕಟ್ಟಿನ 2.40 ಕಿ.ಮೀ ಉತ್ತರಕ್ಕೆ ಒಂದು waste-weir ರನ್ನು ನಿರ್ಮಿಸಲಾಗಿರುತ್ತದೆ. ಸದರಿ Weir 143 ಮಿ (468 ಚದರ) ಉದ್ದ ಹಾಗೂ 1.82 ಮಿ (6 ಚದರ) ಆಳವಾಗಿದ್ದು, 991 cumecs (35,000 cusecs) ಪ್ರಮಾಣದಷ್ಟು ವಿನ್ಯಾಸದ ಪ್ರವಾಹದ ನೀರನ್ನು ಹಾಕಲು 1.82 ಮಿ ನೀರಿನ ಮತ್ತು ಹರಿವಿನ ಎತ್ತರಕ್ಕೆ ವಿನ್ಯಾಸಿಸಲಾಗಿರುತ್ತದೆ.
ನಿರ್ಮಾಣ ಇತಿಹಾಸ
ಅಣೆಕಟ್ಟು 1897 ರಿಂದ 1907ರಲ್ಲಿ ನಿರ್ಮಾಣವಾಗಿರುವ ಕಾರಣದಿಂದ ಅಣೆಕಟ್ಟು ಹಾಗೂ ಅದರ ಇತರ ಕಟ್ಟಡಗಳ ನಿರ್ಮಾಣದ ಇತಿಹಾಸದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ.