ಅವಲೋಕನ
ಗಾಯತ್ರಿ ಜಲಾಶಯವನ್ನು 1963 ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರಿಯಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುತ್ತದೆ. ಈ ಜಲಾಶಯದ ಒಟ್ಟು ಉದ್ದ 1021.53 ಮೀ 9.55 ದಶಲಕ್ಷ ಘನಮೀಹಾಗೂ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನಮೀ (0.97 ಟಿ.ಎಂ.ಸಿ) ಇದ್ದು, ಇದರಲ್ಲಿ ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನಮೀ (0.34 ಟಿ.ಎಂ.ಸಿ) ಮತ್ತು ಉಪಯುಕ್ತ ಸಂಗ್ರಹಣಾ ಸಾಮರ್ಥ್ಯ 18.08 ದಶಲಕ್ಷ ಘನಮೀ 0.63 ಟಿ.ಎಂ.ಸಿ ಇರುತ್ತದೆ. ಇದರ ಒಟ್ಟು ಜಲಾವೃತ ಪ್ರದೇಶ 1831.00 Sq.km ಇರುತ್ತದೆ. ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ಸ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.